Shree Yesu Naama Atishaya Naama | ಶ್ರೀ ಯೇಸು ನಾಮ ಅತೀಶಯ ನಾಮ | Kannada Lyrics
unknown
#81
Font
ಶ್ರೀ ಯೇಸು ನಾಮ ಅತೀಶಯ ನಾಮ
ಪಾಪಿಗೆ ಇಂಪಾದ ನಾಮ (ಹಲ್ಲೆಲೂಯ) (2x)
Verse 1
ಪಾಪ ಪರಿಹಾರಕ್ಕಾಗಿ ಪಾಪಿಗಳ ಹುಡುಕಿ,
ಧರಣಿಗೆ ಬಂದ ನಾಮ, (2x)
ಪಾಪ ರಹಿತ ಜೀವಿತದ ಮಾದರಿಯ ತೋರಿಸಿದ (2x)
ಪರಿಶುದ್ಧ ಪುಣ್ಯ ನಾಮ (ಹಲ್ಲೆಲೂಯ)
|| ಶ್ರೀ ಯೇಸು ನಾಮ..||
Verse 2
ಎಲ್ಲಾ ನಾಮದಲ್ಲಿ ಮೇಲಾದ ನಾಮ,
ಯೇಸುವಿನ ದಿವ್ಯ ನಾಮ (2x)
ಸರ್ವ ಜನರೆಲ್ಲ ಅಡ್ಡ ಬಿದ್ದು ಸ್ತೋತ್ರ ಮಾಡಿ (2x)
ಹರ್ಷದಿಂದ ಹಾಡುವ ನಾಮ (ಹಲ್ಲೆಲೂಯ)
|| ಶ್ರೀ ಯೇಸು ನಾಮ..||
Verse 3
ಲೆಕ್ಕವಿಲ್ಲದಷ್ಟು ಪಾಪ ನನ್ನಿಂದ ತೆಗೆಯಲು,
ನನಗಾಗಿ ಬಂದ ನಾಮ (2x)
ಅನ್ಯನೆಂದು ತಳ್ಳದೇ ಧನ್ಯನಾಗಿ ಮಾಡಲು ಬಂದ (2x)
ಉನ್ನತನ ಪುಣ್ಯ ನಾಮ (ಹಲ್ಲೆಲೂಯ)
|| ಶ್ರೀ ಯೇಸು ನಾಮ..||
Verse 4
ಭೂತ ಬಾಧಿತರಿಗೆ ನಾನಾ ರೋಗಿಗಳಿಗೆ,
ಬಿಡುಗಡೆ ಕೊಡುವ ನಾಮ (2x)
ಕುರುಡರಿಗೂ ಕುಂಟರಿಗೂ ಕುಷ್ಠ ರೋಗಿಗಳಿಗೆಲ್ಲ (2x)
ಸ್ವಸ್ಥಮಾಡುವಂತ ನಾಮ (ಹಲ್ಲೆಲೂಯ)
|| ಶ್ರೀ ಯೇಸು ನಾಮ..||
--------------------------------------
Shree Yesu Naama, Atishaya Naama,
Paapige impaada Naama. (Hallelujah) (2x)
Verse 1
Paapa parihaarakaagi paapigala huduki,
Dharanige banda Naama. (2x)
Paapa rahita jeevitada,
maadariya torisida. (2x)
Parishuddha punya Naama. (Hallelujah)
||Shree Yesu Naama..||
Verse 2
Ellaa naamadalli melaada Naama,
Yesuvina divya Naama. (2x)
Sarvajanarella,
adda biddu stotra maadi. (2x)
Harshadinda haaduva Naama. (Hallelujah)
||Shree Yesu Naama..||
Verse 3
Lekkavilladashtu paapa nanninda tegeyalu,
Nanagaagi banda Naama. (2x)
Anyanendu thallade,
dhanyanaagi maadalu banda. (2x)
Unnatana punya Naama. (Hallelujah)
||Shree Yesu Naama..||
Verse 4
Bhoota baadhitarige, naanaa rogigalige,
Bidugade koduva Naama. (2x)
Kurudariguu kuntariguu,
kushtha rogigaligella. (2x)
Swasthamaaduvanta Naama. (Hallelujah)
||Shree Yesu Naama..||