Kaibidada Devarae | ನನ್ನನೆಂದು ಕೈಬಿಡದ ದೇವರೇ | Kannada Lyrics
Ps Simon Moses
#107
Font
ನನ್ನನೆಂದು ಕೈಬಿಡದ ದೇವರೇ
ನಿನ್ನನ್ನೇ ಆರಾಧಿಸುವೆ
ಒಂದು ಕ್ಷಣವೂ ತೊರೆಯದ ನನ್ನ ಯೇಸುವೇ
ನಿನ್ನನ್ನೇ ಪ್ರೀತಿಸುವೆ (2x)
ನನ್ನ ಬದುಕಿನ ಪುಟಗಳ ಸಂಪೂರ್ಣ ಅರಿತವನೇ (2x)
ಆಧಾರವು ನೀನೇ ಯೇಸಯ್ಯ
ನನ್ನ ಆದರಣೆಯೂ ನೀನೇ ಯೇಸಯ್ಯ (2x)
ನನ್ನ ಬಲವು ನೀನೇ
ನನ್ನ ಜಯವು ನೀನೇ
ನನ್ನ ಧೈರ್ಯ ನೀನೇ ಯೇಸಯ್ಯ
ಅಗ್ನಿಯ ದುರ್ಗ ನೀನೇ
ಮುನ್ನಡೆಸುವ ಸೈನ್ಯ ನೀನೇ
ನನ್ನ ರಕ್ಷಕನು ನೀನೇ ಯೇಸಯ್ಯ (2x)
||ನನ್ನನೆಂದು..ಕೈಬಿಡದ..ದೇವರೇ..||
Verse 1
ಒಂದೊಂದು ದಿನವೂ ನನ್ನ
ಮರೆಯದೆ ಪೋಷಿಸಿರುವೆ
ಎಲ್ಲಾ ಕೇಡಿಗೂ ನನ್ನ
ತಪ್ಪಿಸಿ ಕಾದಿರುವೆ (2x)
ಬರಿದಾಗಿ ಬಂದ ನನ್ನ
ಶ್ರೀಮಂತನ ಮಾಡಿರುವೆ
ಎಷ್ಟೆಷ್ಟೋ ಉಪಕಾರ
ನನಗಾಗಿ ಮಾಡಿರುವೆ
ಜೀವಕಾಲವೆಲ್ಲಾ ನಿನ್ನನ್ನೇ ಸ್ತುತಿಸುವೆ
ಈ ಉಸಿರು ನಿಲ್ಲೋವರೆಗೂ ನಿನಗಾಗಿಯೇ ಬಾಳುವೆ
||ನನ್ನ..ಬಲವು..ನೀನೇ..||
||ನನ್ನನೆಂದು..ಕೈಬಿಡದ..ದೇವರೇ..||
Verse 2
ಬಲವು ಕುಂದಿದಾಗ
ಸಹಾಯವು ಇಲ್ಲದಾಗ
ಕತ್ತಲೆ ಕಣಿವೆಯಲ್ಲೂ ನನ್ನ ನಂಬಿಕೆ ನೀನೇ (2x)
ಕಷ್ಟದಿ ಬಿಡಿಸುವೆ
ದೊಡ್ಡ ಕಾರ್ಯವ ಮಾಡುವೆ (2x)
ನೋವಲ್ಲೆಲ್ಲ ಮುಂದೆ ದೊಡ್ಡ ಸಾಕ್ಷಿಯಾಗಿಸುವೆ (ನನ್ನ) (2x)
||ನನ್ನ..ಬಲವು..ನೀನೇ..||
||ನನ್ನನೆಂದು..ಕೈಬಿಡದ..ದೇವರೇ..||
Verse 3
ನಾ ಕಂಡ ಕನಸುಗಳೆಲ್ಲ
ನಡೆಯೋಲ್ಲ ಎಂದು ಕಂಡರೂ
ಅದ್ಭುತ ನಡೆವ ಸಾಧ್ಯತೆ
ಇಲ್ಲದೆ ಹೋದರೂ (2x)
ಇಲ್ಲದ್ದನ್ನು ಇರೋದಾಗಿ ಕರೆಯುವ ದೇವರೇ
ಸತ್ತದ್ದಕ್ಕೆ ಜೀವವನ್ನು ಕೊಡುವ ಕರ್ತನೇ
ನೀ ನುಡಿದ ಮಾತು ಎಂದಿಗೂ ವ್ಯರ್ಥವಾಗಿ ಬೀಳದು
ಅದ ತಡೆಯೋ ಶಕ್ತಿ ಯಾವುದೂ ನಮ್ಮೆದುರು ನಿಲ್ಲದು
||ನನ್ನ..ಬಲವು..ನೀನೇ..||
||ನನ್ನನೆಂದು..ಕೈಬಿಡದ..ದೇವರೇ..||
----------x----------x----------
Nannanendu Kaibidada Devare
Ninnanne Aradhisuve
Ondu Kshanavu Toreyada Nanna Yesuve
Ninnanne Preetisuve (2x)
Nanna Badukina Putagala
Sampoorna Aritavane (2x)
Aadharavu Neene Yesayya
Nanna Aadaraneyu Neene Yesayya (2x)
Nanna Balavu Neene
Nanna Jayavu Neene
Nanna Dhairya Neene Yesayya
Agniya Durga Neene
Munnadesuva Sainya Neene
Nanna Rakshakanu Neene Yesayya (2x)
||Nannanendu..Kaibidada..Devare..||
Verse 1
Ondondu Dinavu Nanna
Mareyade Poshisiruve
Ella Kedigu Nanna
Tappisi Kadiruve (2x)
Baridagi Banda Nanna
Shrimanthana Madiruve
Eshteshto Upakara
Nanagagi Madiruve
Jeevakalavella Ninnanne Stutisuve
Ee Usiru Nillovaregu Ninagagiye Baluve
||Nanna..Balavu..Neene..||
||Nannanendu..Kaibidada..Devare..||
Verse 2
Balavu Kundidaga
Sahayavu Illadaga
Kattale Kaniveyallu
Nanna Nambike Neene (2x)
Kashtadi Bidisuve
Dodda Karyava Maduve (2x)
Novallella Munde Dodda Sakshiyagisuve (Nanna) (2x)
||Nanna..Balavu..Neene..||
||Nannanendu..Kaibidada..Devare..||
Verse 3
Naa Kanda Kanasugalella
Nadeyolla Endu Kandaru
Adbhuta Nadeya Sadhyate
Illade Hodaru (2x)
Illaddannu Irodagi Kareyuva Devare
Sattaddakke Jeevavannu Koduva Karthane
Nee Nudida Maathu Endigu
Vyarthavagi Biladu
Ada Tadeyo Shakti Yaavudu
Nammeduru Nilladu
||Nanna..Balavu..Neene..||
||Nannanendu..Kaibidada..Devare..||